Friday, February 28, 2014

Shri Krishnana Nooraru Geethegalu - 355

ಶಿವನೆನ್ನಿರೋ

ಶಿವನೆನ್ನಿರೋ ಇಹದೊಳು ನೀವು
ಶಿವಶಿವಶಿವನೆನಲು ಭವದ ಮೋಹವ ಕಳೆವ

ಪಾರ್ವತಿಪ್ರಿಯನೆನ್ನಿ ಗೌರಿಹೃದಯನೆ ಎನ್ನಿ
ಗಂಗೆಯ ಜಟೆಯೊಳು ಧರಿಸಿದನೆ ಎನ್ನಿ
ಆದಿಪೂಜಿತನ ಶ್ರೀಸುಬ್ರಹ್ಮಣ್ಯನ
ಪ್ರಿಯಪಿತನೆಮ್ಮ ನಿಟಿಲಾಕ್ಷನೆ ಎನ್ನಿ (೧)

ಮೈಯ್ಯ ಶುದ್ಧಿಯನೊಲ್ಲ ಮನದಶುದ್ಧಿಯ ಬಲ್ಲ
ಶಿವನೆಂಬೊ ಸುಜನಂಗೆ ಇವನೇ ಎಲ್ಲ
ಕಲಿಯೊಳು ಧರೆಕಾವ ಶ್ರೀನಿವಾಸ ವಿಠಲ
ಪ್ರಿಯದೇವ ಲಯದೇವ ಶ್ರೀಹರನೆನ್ನಿ (೨)

ಶಿವನೆನ್ನಿರೋ ಇಹದೊಳು ನೀವು
ಶಿವಶಿವಶಿವನೆನಲು ಭವದ ಮೋಹವ ಕಳೆವ

ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೬.೦೨.೨೦೧೪

3 comments:

  1. ಶತಮಾನಗಳ ಹಿಂದೆ ಶೈವ v/s. ವೈಷ್ಣವ ಜಟಾಪಟಿಗಳು ನಡೆಯುತ್ತಿದ್ದವಂತೆ. ಆ ಕಾಲದಲ್ಲಿ ತಕ್ಕಂತಹ ಪ್ರಬುದ್ಧರು ಜನಿಸಬೇಕಿತ್ತು.
    ಈ ಕೃತಿಯಲ್ಲಿ ಹರಿ ಹರ ಸಮನ್ವಯ ಸಾಧಿಸಿದ್ದೀರಿ ತಾವು.

    ReplyDelete
  2. No words.....spechless Sir....I should read the whole concept and digest the same ...amazing indeed...let god bless u with many more kritis from you...HARE RAMA HARE RAMA RAMA RAMA HARE HARE...!!!!!!!!

    ReplyDelete