Saturday, April 6, 2013

Shri Krishnana Nooraru Geethegalu - 338

ಮೋಹಿ ಎನ್ನದಿರೊ ಶ್ರೀಹರಿಯೆನ್ನ

ಮೋಹಿ ಎನ್ನದಿರೊ ಶ್ರೀಹರಿಯೆನ್ನ ವ್ಯಾಮೋಹಿ ಎನ್ನದಿರೊ
ನಿನ್ನ ಶ್ರೀಚರಣದಾ ಸೇವೆ ಬೇಡುವೀ ನರನ

ಚಿನ್ನವ ಕೇಳೆನೊ ರನ್ನವ ಕೇಳೆನೊ
ಸಕಲ ಸುಖಭೋಗ ಆಯುಷ್ಯವ
ಕೇಡನೆ ಉಂಡುಟ್ಟ ಕುರುಸುತರಂದದೊಳು
ಚರವದು ಸ್ಥಿರವೆನುವ ಅತಿಸ್ವಾರ್ಥವ (೧)

ಅರಸು ತಾವೆಂದು ಅರೆಕ್ಷಣವಿರಲಿಲ್ಲ
ಕಾಸಿನ ಕಿರೀಟ ಮಣ್ಣಾದೊ
ಮೂಜಗ ತಮದೆಂದು ಮೂರುಕ್ಷಣವಿರಲಿಲ್ಲ
ಮುನ್ನೂರು ಶತಕೋಟಿ ಶಿರವಳಿದೊ (೨)

ನಾನು ನಾನೆಂಬುದೆಲ್ಲ ನಿನ್ನ ನಾಮದ ಧೂಳು
ನಾನು ನಾನೆಂಬುವನ ನಾಮವಳಿಯಿತು ನೋಡು
ಧರೆಯೊಳು ನೀ ದೊರೆಯೊ ಶ್ರೀನಿವಾಸ ವಿಠಲಯ್ಯ
ನಿನ್ನ ಶ್ರೀಚರಣದೊಳು ಎನಗೆ ನೆರಳನು ನೀಡು (೩)

ಮೋಹಿ ಎನ್ನದಿರೊ ಶ್ರೀಹರಿಯೆನ್ನ ವ್ಯಾಮೋಹಿ ಎನ್ನದಿರೊ
ನಿನ್ನ ಶ್ರೀಚರಣದಾ ಸೇವೆ ಬೇಡುವೀ ನರನ

ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೬.೦೪.೨೦೧೩

1 comment:

  1. ಎನೋಂದೂ ಬಯಸದೇ ಬರಿಯ ಚರಣಗಳ ದಾಸನಾಗುವ ಬಯಕೆ, ಇಂದಿನ ಸ್ವಾರ್ಥೀ ಕಾಲದಲ್ಲಿ ಭಕ್ತ ಜನ ಅರ್ಥೈಸಿಕೊಳ್ಳಬೇಕಾದ ಸದ್ವಿಚಾರ.

    ReplyDelete