Sunday, April 7, 2013

Shri Krishnana Nooraru Geethegalu - 339

ಕಂದನ ಕಂಡಿರಾ

ಕಂದನ ಕಂಡಿರಾ ಶ್ರೀಕೃಷ್ಣನ ಕಂಡಿರಾ
ಗೆಜ್ಜೆ ಕಾಲ್ಗಳ ಗೋಕುಲದೊಡೆಯ ಶ್ರೀಗೋವಿಂದನ ಕಂಡಿರಾ

ಕಮಲ ನಯನನ ಕಸ್ತೂರಿ ತಿಲಕನ
ರಂಗಿನ ಗಲ್ಲದ ಚೆಂದದ ತುಟಿಯೊಳು ಮೆಲ್ಲನೆ ನಗುವನ

ಗರಿಯ ಮುಡಿದನ ಮುರನ ಹರಿದನ
ಪೂತನೆಯ ವಿಷಮೊಲೆಯನುಂಡು ಮಾತೆ ಎಂದವನ

ಪಾಮರ ಸ್ನೇಹನ ರಾಧೆಯ ಪ್ರೇಮನ
ನರನ ಭವವನಳಿದು ಶುಭವ ಕೊಡುವನುಭವನ

ತ್ರೇತೆಯ ರಾಮನ ದ್ವಾಪರ ಶ್ಯಾಮನ
ರಾಯರೂಪದಿ ಧರೆಯ ಕಾಯ್ವ ಶ್ರೀನಿವಾಸ ವಿಠಲ

ಕಂದನ ಕಂಡಿರಾ ಶ್ರೀಕೃಷ್ಣನ ಕಂಡಿರಾ
ಗೆಜ್ಜೆ ಕಾಲ್ಗಳ ಗೋಕುಲದೊಡೆಯ ಶ್ರೀಗೋವಿಂದನ ಕಂಡಿರಾ

ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೮.೦೪.೨೦೧೩

1 comment:

  1. 'ಪಾಮರ ಸ್ನೇಹನ' ಎನ್ನುವಾಗ ಕುಚೇಲಾದಿಯಾಗಿ ನಾವೆಲ್ಲ ಪಟ್ಟಿಯಲ್ಲಿ ಬಂದೆವು....

    ReplyDelete