Wednesday, August 21, 2013

Shri Krishnana Nooraru Geethegalu - 348

ಭಜಿಸಿರೊ ಎಮ್ಮ ರಾಯರ

ಭಜಿಸಿರೊ ಎಮ್ಮ ರಾಯರ ಪೂಜಿಸಿ ಗುರುರಾಯರ
ತುಂಗಾತೀರದ ಮಂತ್ರಾಲಯದಿ ನಿಂತು ಸುಜನರ ಕಾಯ್ವರ

ಭುವನಗಿರಿಯ ರವಿಯೊ ಇವರು ಭವದ ಕತ್ತಲ ಕಳೆವರು
ಕಲಿಯೊಳ್ ನರರ ಕೋಟಿಜನುಮದ ಪಾಪಕರ್ಮವ ತೊಳೆವರು
ಕಶ್ಯಪನ ಕಂದನವನ ಪುಣ್ಯರೂಪರೊ ರಾಯರು
ನಂಬಿ ಗುರುವೇ ನೀವೇ ಎನಲು ಸಕಲಮಂಗಳ ತರುವರು (೧)

ಯತಿಗಳಲಿ ಸುಯತಿಯಿವರು ಸನ್ಮತಿಯನು ಈವರು
ಗತಿಹೀನಗೆ ಸುಗತಿಯಿವರು ಕಲಿಯುಗದ ದೇವರು
ಶ್ರೀನಿವಾಸ ವಿಠಲನೊಲಿದ ರಾಘವೇಂದ್ರರಾಯರು
ಕರುಣಾನಿಧಿಯೆ ಕಾಯೋ ಎನಲು ಬಂದು ಎಮ್ಮೊಳು ನಿಲ್ವರು (೨)

ಭಜಿಸಿರೊ ಎಮ್ಮ ರಾಯರ ಪೂಜಿಸಿ ಗುರುರಾಯರ
ತುಂಗಾತೀರದ ಮಂತ್ರಾಲಯದಿ ನಿಂತು ಸುಜನರ ಕಾಯ್ವರ

ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೯೯೦೧೯ ೧೮೬೬೬ / ೨೨.೦೮.೨೦೧೩

1 comment:

  1. ರಾಯರ ಆರಾಧನಾ ಸಕಾಲದಲ್ಲಿ ವಿರಚಿತ ಈ ಗಾನ ಕುಸುಮ ಅವರ ಪದ ತಳಕೆ ನಿಮ್ಮ ಭಾವಾರ್ಪಣೆ.

    ReplyDelete