Thursday, August 15, 2013

Sri Krishnana Nooraru Geethegalu - 347

ಕಾಯೆ ಜಗದಂಬೆ

ಶುಭವರದೆ ಶಾರದೆ ವಂದೆ
ಬೇಡುವೆನು ತಾಯೆ ಸಲಹೆನ್ನ ಮುಂದೆ

ಮಂಗಳವದನೆ ಹಂಸಗಮನೆ
ಸ್ಥಿರಮಾಂಗಲ್ಯೆ ನೀ ಕುಂಕುಮಚಂದನೆ
ಕೂಡಲಿ ನಿಲುವಾಂಬೆ ಈ ದೀನನ ಅಂಬೆ
ಕಲಿಯೊಳು ಸುಜನರ ಬಿಡದೇ ಕಾಯೆಂಬೆ (೧)

ಭವದಂಧವ ಕಳೆಯೆ ಸುರವಂದಿತೆ ಪೊರೆಯೆ
ಬ್ರಹ್ಮನ ಸತಿ ವಾಣಿ ಜಯೆವಿಜಯೆ
ಕೋಟೆಬೆಟ್ಟದ ವಾಸ ಶ್ರೀನಿವಾಸ ವಿಠಲ
ಚರಣದೀ ದಾಸನ ಕಾಯೆ ನೀ ಮಾಯೆ (೨)

ಶುಭವರದೆ ಶಾರದೆ ವಂದೆ
ಬೇಡುವೆನು ತಾಯೆ ಸಲಹೆನ್ನ ಮುಂದೆ

ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೫.೦೮.೨೦೧೩

1 comment:

  1. ನನಗೆ ಖುಷಿಯಾದ ಕಾರಣಗಳ ಪಟ್ಟಿ:
    1. ಮೊದಲ ಕಾಮೆಂಟ್ ಹಾಕಿದ್ದೇ Sharada Moleyar M ಅವರು
    2. ಸರಿಯಾದ ಸಂಯೋಜಕನಾ ಕೈಯಲ್ಲಿ ಸಿಕ್ಕರೆ ಒಳ್ಳೆಯ ಶಾರದ ಪ್ರಾರ್ಥನೆ.
    3. ಯಾವ ಕೋಟೆಬೆಟ್ಟ?

    ReplyDelete