ಕೃಷ್ಣ ಶ್ರೀಕೃಷ್ಣನೆನಿರೊ
ಕೃಷ್ಣ ಶ್ರೀಕೃಷ್ಣನೆನಿರೊ ಕ್ಷಣವು ನೆನೆಯಿರೊ
ಕೃಷ್ಣ ಶ್ರೀಕೃಷ್ಣ ಎನುತ ಭವವ ಮರೆಯಿರೊ
ವಸುದೇವನ ಸುತನವನ ಗೋಪಿ ಕಂದನ
ಯದುವಂಶಜ ಶ್ರೀತಿಲಕ ಅರವಿಂದನ
ಮಥುರೆಯೊಳು ಮದದೊಳುರಿದ ಮಾವಕಂಸನ
ಗರ್ವಮುರಿದು ಸುಜನರಿರ್ದ ಧರೆಯ ಕಾಯ್ದನ (೧)
ಪೂತನೆಯ ವಿಷಮೊಲೆಯ ಉಂಡು ಜಯಿಸಿದ
ಕಾಲಿಂದಿಯ ಹೆಡೆಮೆಟ್ಟಿ ಕ್ಷಣದಿ ಮಣಿಸಿದ
ಕಿರುಬೆರಳೊಳು ಗಿರಿಯ ತಾನು ಎತ್ತಿ ನಿಲಿಸಿದ
ಬ್ರಹ್ಮಾದಿ ಇಂದ್ರನಹಂ ನಯದಿ ಅಳಿಸಿದ (೨)
ತ್ರೇತೆಯೊಳು ರಾಮನಿವನೊ ಧರ್ಮ ಪೊರೆದವ
ದ್ವಾಪರದಿ ನಿಜ ಗೆಲಿಸಿದ ರಾಧೆಮಾಧವ
ಕಲಿಯೊಳಗೆ ಭಜಿಪ ನರಗೆ ಸುಖವನೀಯುವ
ಕಿಂಡುಡುಪಿಯ ಶ್ರೀನಿವಾಸ ವಿಠಲನೇ ಇವ (೩)
ಕೃಷ್ಣ ಶ್ರೀಕೃಷ್ಣನೆನಿರೊ ಕ್ಷಣವು ನೆನೆಯಿರೊ
ಕೃಷ್ಣ ಶ್ರೀಕೃಷ್ಣ ಎನುತ ಭವವ ಮರೆಯಿರೊ
ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೨.೦೯.೨೦೧೪
ಕೃಷ್ಣ ಶ್ರೀಕೃಷ್ಣನೆನಿರೊ ಕ್ಷಣವು ನೆನೆಯಿರೊ
ಕೃಷ್ಣ ಶ್ರೀಕೃಷ್ಣ ಎನುತ ಭವವ ಮರೆಯಿರೊ
ವಸುದೇವನ ಸುತನವನ ಗೋಪಿ ಕಂದನ
ಯದುವಂಶಜ ಶ್ರೀತಿಲಕ ಅರವಿಂದನ
ಮಥುರೆಯೊಳು ಮದದೊಳುರಿದ ಮಾವಕಂಸನ
ಗರ್ವಮುರಿದು ಸುಜನರಿರ್ದ ಧರೆಯ ಕಾಯ್ದನ (೧)
ಪೂತನೆಯ ವಿಷಮೊಲೆಯ ಉಂಡು ಜಯಿಸಿದ
ಕಾಲಿಂದಿಯ ಹೆಡೆಮೆಟ್ಟಿ ಕ್ಷಣದಿ ಮಣಿಸಿದ
ಕಿರುಬೆರಳೊಳು ಗಿರಿಯ ತಾನು ಎತ್ತಿ ನಿಲಿಸಿದ
ಬ್ರಹ್ಮಾದಿ ಇಂದ್ರನಹಂ ನಯದಿ ಅಳಿಸಿದ (೨)
ತ್ರೇತೆಯೊಳು ರಾಮನಿವನೊ ಧರ್ಮ ಪೊರೆದವ
ದ್ವಾಪರದಿ ನಿಜ ಗೆಲಿಸಿದ ರಾಧೆಮಾಧವ
ಕಲಿಯೊಳಗೆ ಭಜಿಪ ನರಗೆ ಸುಖವನೀಯುವ
ಕಿಂಡುಡುಪಿಯ ಶ್ರೀನಿವಾಸ ವಿಠಲನೇ ಇವ (೩)
ಕೃಷ್ಣ ಶ್ರೀಕೃಷ್ಣನೆನಿರೊ ಕ್ಷಣವು ನೆನೆಯಿರೊ
ಕೃಷ್ಣ ಶ್ರೀಕೃಷ್ಣ ಎನುತ ಭವವ ಮರೆಯಿರೊ
ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೨.೦೯.೨೦೧೪
ಕೃಷ್ಣನ್ನು ಎನಿತು ಕೊಂಡಾಡಿದರೂ ತೀರದು ಭಕ್ತಿಯ ಭಾವ ಅಲ್ಲವೇ!
ReplyDelete’ವಸುದೇವನ ಸುತನವನ ಗೋಪಿ ಕಂದನ.
ಯದುವಂಶಜ ಶ್ರೀತಿಲಕ ಅರವಿಂದನ
ಮಥುರೆಯೊಳು ಮದದೊಳುರಿದ ಮಾವಕಂಸನ
ಗರ್ವಮುರಿದು ಸುಜನರಿರ್ದ ಧರೆಯ ಕಾಯ್ದನ’
ಸುಲಲಿತ ಪದ ಪ್ರಯೋಗ...