Wednesday, December 10, 2014

Shri Krishnana Nooraru Geethegalu - 358

ಹರಿಯ ನೆನೆಯದೆ

ನೂರು ಕಾಲ ಬಾಳಲೇನು ಹರಿಯ ನೆನೆಯದೆ
ನೂರು ಜನುಮ ಬದುಕಲೇಕೆ ಹರಿಯ ನೆನೆಯದೆ


ಶುದ್ಧಚರಿತನಾದ ಎಮ್ಮ ಹರಿಯ ನೆನೆಯದೆ
ಸದ್ವಿಚಾರಭರಿತ ಎಮ್ಮ ಹರಿಯ ನೆನೆಯದೆ
ಬಕುತಸಂಗ ನಿರತನೆಮ್ಮ ಹರಿಯ ನೆನೆಯದೆ
ದಶದಿ ರೂಪಧರಿತ ಎಮ್ಮ ಹರಿಯ ನೆನೆಯದೆ (೧)

ಪುರುಷೋತ್ತಮ ರಾಮನೆಂಬೊ ಹರಿಯ ನೆನೆಯದೆ
ಶ್ಯಾಮ ಜಗದ ಕ್ಷೇಮವೆಂಬೊ ಹರಿಯ ನೆನೆಯದೆ
ಶ್ರೀನಿವಾಸ ವಿಠಲ ನಾಮದ ಹರಿಯ ನೆನೆಯದೆ
ಮುಕುತಿಪದವು ಸಿಗದು ಮನುಜ ಹರಿಯ ನೆನೆಯದೆ (೨)

ನೂರು ಕಾಲ ಬಾಳಲೇನು ಹರಿಯ ನೆನೆಯದೆ
ನೂರು ಜನುಮ ಬದುಕಲೇಕೆ ಹರಿಯ ನೆನೆಯದೆ

ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೧.೧೨.೨೦೧೪

2 comments:

  1. ನೂರು ಕಾಲ ಬಾಳಲೇನು- ನೂರು ಜನುಮ ಬದುಕಲೇಕೆ ಎನ್ನುವ ತಮ್ಮ ಛಾಟೀ ಏಟಿನಂತಹ ದಾಸ ಸಾಹಿತ್ಯ ಮನ ಮುಟ್ಟಿತು.

    ReplyDelete
  2. shared at:
    https://www.facebook.com/groups/191375717613653?view=permalink&id=435285689889320

    ReplyDelete