ಕಂಡೆನಾ ಕೃಷ್ಣನ
ಕಂಡೆನಾ ಕೃಷ್ಣನ ಕಂಡೆ
ಗೋವಿಂದನ
ಕಂಡೆ ನಂದನ ಕಂದನ ಕಂಡೆ
ಅರವಿಂದನ
ರಘುವಂಶಜ ದಶರಥನ ಪ್ರಿಯಸುತನ
ಕಂಡೆನಾ
ಸುಚರಿತ ಸುಗುಣಗುಣ ಅಮಿತನ
ಕಂಡೆನಾ
ಧರ್ಮ ಕೋದಂಡಧಾರಿ ದುರುಳಸಂಹಾರನ
ಗತಿ ನೀನೆಯೆನಲು ಕಾವ
ತಂದೆ ಶ್ರೀರಾಮನ (೧)
ಹಣೆಗೆ ಗಂಧ ತಿಲಕ ಬಳಿದು
ನಗುವ ಚೋರನ
ಹೆಡೆಯ ಮೆಟ್ಟಿ ಗಿರಿಯನೆತ್ತಿ
ಮೆರೆದ ಧೀರನ
ಕೋಟೆಬೆಟ್ಟದೊಡೆಯನೆಮ್ಮ
ಶ್ರೀನಿವಾಸ ವಿಠಲನ
ಮತ್ಸ್ಯ ಕೂರ್ಮ ಸಿಂಹ
ದಶದಿ ಧರೆಯ ಪೊರೆದ ದೇವನ (೨)
ಕಂಡೆನಾ ಕೃಷ್ಣನ ಕಂಡೆ
ಗೋವಿಂದನ
ಕಂಡೆ ನಂದನ ಕಂದನ ಕಂಡೆ
ಅರವಿಂದನ
ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ
No comments:
Post a Comment