ಪುಳಕಗೊಳುತಿದೆ ಸಂಜೆ
ತೀಡಿಬಹ ತಂಗಾಳಿ ಪೇಳುತಿದೆ ಬಳಿಸಾರಿ ಶ್ಯಾಮ ಬರುವನೆ ರಾಧೆ ಕ್ಷಣದೊಳೆಂದು
ಬೇಸರವ ಕಳೆದಿನ್ನು ಸಿಂಗಾರವಾಗೆಂದು ಆಸೆ ಶರಗಳ ಹೂಡಿ ಎನ್ನೆದೆಗೆ ಇಂದು
ಬೃಂದಾವನದೊಳಗೆ ಚೆಲುವದುವು ನಾಚುತಿದೆ ಚಿಗುರು ಚೈತ್ರದ ನಡುವೆ ಚಿಟ್ಟೆ ಆಡಿ
ಕೋಕಿಲನೆ ಗಾಯಕನು ಚಿಲಿಪಿಲಿಯ ವೈಣಿಕನು ಪುಳಕಗೊಳುತಿದೆ ಸಂಜೆ ಪ್ರೀತಿ ಮೋಡಿ
ಪಡುವಣದ ಕಡಲಿನಲಿ ನಾಚಿ ನೇಸರ ಕೆನ್ನೆ ಓಡಿದನು ಎನ್ನ ಶ್ಯಾಮ ಬರುವನೆಂದು
ಕಾಯುತಿವೆ ಆಗಸದಿ ಚುಕ್ಕಿ ಪ್ರಣತಿಯ ಸಾಲು ರಾಧೆ ಗಲ್ಲಕೆ ಅಧರ ಇಡುವನೆಂದು
ನೊರೆಹಾಲು ಗಡಿಗೆಯದು ಉಣಿಸುವುದು ಶ್ಯಾಮನಿಗೆ ಮೈಮನವ ತಣಿಸೆ ತಾ ಇಹಳು ರಾಧೆ
ರಾಧೆ ಹೃದಯನು ಕೃಷ್ಣ ಶ್ರೀನಿವಾಸ ವಿಠಲಯ್ಯ ಒಲುಮೆವರ್ಷದಿ ಕಳೆವ ಅವಳ ಭಾದೆ

ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೦.೧೧.೨೦೧೨

ರಾಧಾ ಶ್ಯಾಮರ ಶೃಂಗಾರ ಹೆಣೆಯುತ್ತ ಪ್ರಕೃತಿಯನ್ನು ಕಟ್ಟಿಕೊಟ್ಟ ಪರಿಯೇ ಸೊಬಗು.
ReplyDeleteಬಹಳ ಸುಂದರವಾದ ರಚನೆ.
ReplyDeleteThank U Badri Brother and Sheela ji...
Delete