Thursday, October 25, 2012

Shri Krishnana Nooraru Geethegalu - 312

ಕರಮುಗಿವೆ ಶ್ರೀಮಾತೆ

ಕರಮುಗಿವೆ ಶ್ರೀಮಾತೆ ಕಾತ್ಯಾಯನಿ
ಸಕಲ ಶುಭಗಳ ನೀಡೆ ನಾರಾಯಣಿ

ಶಿವದೂತೆಯೆ ವಂದೆ ಪರಮೇಶ್ವರಿ
ಸತಿ ಸಾಧ್ವಿ ಶಾಂಭವಿಯೆ ಸುರಸುಂದರಿ
ಕಳೆಯೆಮ್ಮ ಕರುಮಗಳ ಜಗದೀಶ್ವರಿ
ಅನಂತೆ ವರದಾತೆ ಆದಿಶಂಕರಿ (೧)

ಜಯಜಯತು ಜಯದುರ್ಗೆ ಶೂಲಧಾರಿಣಿ
ಶ್ರೀಮಾತೆ  ತ್ರೈನೇತ್ರೆ ಬಕುತಕರುಣಿ
ಶ್ರೀನಿವಾಸ ವಿಠಲಾಂಶೆ ಸುಖದಾಯಿನಿ
ಶರಣೆನುವೆ ಸಲಹೆಮ್ಮ ಶ್ರೀಭವಾನಿ (೨)

ಕರಮುಗಿವೆ ಶ್ರೀಮಾತೆ ಕಾತ್ಯಾಯನಿ
ಸಕಲ ಶುಭಗಳ ನೀಡೆ ನಾರಾಯಣಿ

    ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೫.೧೦.೨೦೧೨

1 comment:

  1. ಅಮೋಘವಾಗಿ ಹಾಡುವ ಛಾಯಾ ಮೇಡಂ ಕೈಯಲ್ಲಿ ಈ ಭಕ್ತಿ ಗೀತೆ ಗೊಂಚಲು ಹಾಡಿಸಿ ನಮಗಾಗಿ ಮಾರುಕಟ್ಟೆಗೆ ನೀವು ತರಬೇಕು.

    ReplyDelete