Friday, February 8, 2013

Shri Krishnana Nooraru Geethegalu - 334

ನೀವು ಕಂಡಿರೆ

ಇಂದುವದನ ಕಮಲನಯನ ಚೆಲ್ವನ ಕಂಡಿರೆ ನೀವು
ಯದುನಂದನ ದೇವಕಿಕಂದನ ಕೃಷ್ಣನ ಕಂಡಿರೆ

ಚೆಂದ ಚಂದನ ತಿಲಕವಿಟ್ಟನ ಪುಟ್ಟನ ಕಂಡಿರೆ
ಕದ್ದು ಬೆಣ್ಣೆಯ ಮೆದ್ದು ಒಪ್ಪದ ತುಂಟನ ಕಂಡಿರೆ
ಜಗದ ಕತ್ತಲ ಹೆಡೆಯ ಮೆಟ್ಟಿದ ದಿಟ್ಟನ ಕಂಡಿರೆ
ಜರಾಸಂಧನ ಅಹಂ ಅದನು ತರಿದಿಟ್ಟನ ಕಂಡಿರೆ (೧)

ರಾಧೆಯ ಲೋಲನ ಜಗದಿಕ್ಪಾಲನ ನೀವು ಕಂಡಿರೆ
ಗೋವ್ಗಳ ಕಾಯುತ ಗಾನವಗೈಯ್ಯುವ ಗೊಲ್ಲನ ಕಂಡಿರೆ
ಭವಗೋವರ್ಧನ ಬೆರಳೊಳಗೆತ್ತಿದ ಭವ್ಯನ ಕಂಡಿರೆ
ಇಂದಿರಾಪತಿಯೆಮ್ಮ ಶ್ರೀನಿವಾಸ ವಿಠಲನ ನೀವು ಕಂಡಿರೆ

ಇಂದುವದನ ಕಮಲನಯನ ಚೆಲ್ವನ ಕಂಡಿರೆ ನೀವು
ಯದುನಂದನ ದೇವಕಿಕಂದನ ಕೃಷ್ಣನ ಕಂಡಿರೆ

ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೮.೦೨.೨೦೧೩

1 comment:

  1. ಇಂದುವದನ ಕಮಲನಯನ ಎಂದು ಆರಂಭವಾಗುವ ಅತಿ ಸುಂದರ ಈ ದಾಸ ಸಾಹಿತ್ಯವು, ಚೆಲುವ ಚೆನ್ನಿಗರಾಯನನ್ನು ಸಾಕ್ಷಾತ್ಕರಿಸಿತು.

    ReplyDelete