Friday, January 18, 2013

Shri Krishnana Nooraru Geethegalu - 333

ಭವದ ಕಡಲ ದಾಟಿಸೊ

ಭವದ ಕಡಲ ದಾಟಿಸೊ ಅಭವ ಕೃಷ್ಣ
ಹರಿಯ ನೆನೆಯದೀ ನರನ ಮುರಾರಿಯೆ

ಎನ್ನ ಕಂಗಳ ಕೊಳೆ ತೊಳೆಯೊ ಕೃಷ್ಣ
ಕರ್ಣಗಳಲಿ ಶುದ್ಧ ಕೊಳಲುಲಿಯೊ
ಚರಣಕೆ ಮುಗಿಯುವೆ ಎನಗೊಲಿಯೊ ಕೃಷ್ಣ
ಅನ್ಯಗಳಳಿದು ನೀ ಎನ್ನೊಳ ನಲಿಯೊ (೧)

ಯಾರಿಲ್ಲವೆನಗೆ ನೀ ದೊರೆಯೊ ಕೃಷ್ಣ
ದುರಿತವ ಕಳೆ ದೇವ ಇದು ಮೊರೆಯೊ
ಬಿಂದುಬಿಂದುಗಳಲ್ಲಿ ಆನಂದ ರೂಪನೆ
ಶ್ರೀನಿವಾಸ ವಿಠಲನೆ ಜಗ ಪೊರೆಯೊ (೨)

ಭವದ ಕಡಲ ದಾಟಿಸೊ ಅಭವ ಕೃಷ್ಣ
ಹರಿಯ ನೆನೆಯದೀ ನರನ ಮುರಾರಿಯೆ

ರಚನೆ: ಎನ್ಕೆ, ಭದ್ರಾವತಿ / ೧೮.೦೧.೨೦೧೩

1 comment:

  1. ಎನ್ನ ಕಂಗಳ ಕೊಳೆ ತೊಳೆಯೊ ಕೃಷ್ಣ

    ಎನ್ನುತ ಬೇಡಿಕೆಯಿಟ್ಟ ದಾಸ ಪದ ನೆಚ್ಚಿಗೆಯಾಯ್ತು.

    ReplyDelete