ಅವಳ ಹನಿಪ್ರೀತಿಗೆ ಬೊಗಸೆಯೊಡ್ಡಿದೆ
ಸುರಿದು ಜೇನಮಳೆಯಾದಳು
ಗೊತ್ತಿತ್ತು, ಅವಳು ನಿಲ್ಲುವಳಲ್ಲವೆಂದು
ನದಿಯಾಗಿ ಸರಿದು ಕಡಲ ಸೇರಿದಳು
ಕಾಯುತ್ತಿದ್ದೇನೆ ಬೇಗೆಯೆದೆಯ ತೆರೆದಿಟ್ಟು
ಮತ್ತವಳು ಮೋಡವಾಗುವವರೆಗೆ
ಮೋಡ ಮಳೆಯಾಗುವ ಮಾಯೆಗೆ
***
ಹೆಬ್ಬಂಡೆಯಂಥ ಇವಳು
ಪ್ರೀತಿಗೆ ಕರಗಲೊಲ್ಲಳು
ನದಿಯಾಗಿ ನಾನಿವಳ ನಡು ಬಳಸಿ
ಹರಿಯುತ್ತಲೇ ಇದ್ದೇನೆ
ಕಲ್ಲು ಮೆದುವಾದೀತೆಂಬ ಆಸೆಯಲಿ
ಸುರಿದು ಜೇನಮಳೆಯಾದಳು
ಗೊತ್ತಿತ್ತು, ಅವಳು ನಿಲ್ಲುವಳಲ್ಲವೆಂದು
ನದಿಯಾಗಿ ಸರಿದು ಕಡಲ ಸೇರಿದಳು
ಕಾಯುತ್ತಿದ್ದೇನೆ ಬೇಗೆಯೆದೆಯ ತೆರೆದಿಟ್ಟು
ಮತ್ತವಳು ಮೋಡವಾಗುವವರೆಗೆ
ಮೋಡ ಮಳೆಯಾಗುವ ಮಾಯೆಗೆ
***
ಹೆಬ್ಬಂಡೆಯಂಥ ಇವಳು
ಪ್ರೀತಿಗೆ ಕರಗಲೊಲ್ಲಳು
ನದಿಯಾಗಿ ನಾನಿವಳ ನಡು ಬಳಸಿ
ಹರಿಯುತ್ತಲೇ ಇದ್ದೇನೆ
ಕಲ್ಲು ಮೆದುವಾದೀತೆಂಬ ಆಸೆಯಲಿ
ಮೊದಲ ಕವನದ ಆಳದಲ್ಲಿರುವ ಹಪಹಪಿ ಒಲುಮೆಯ ತಪಸ್ಸಿನಂತಿದೆ.
ReplyDeleteಎರಡನೇ ಹನಿ ಸಾಕ್ಷಾತ್ಕಾರದ ಆನಂತರ ಒಲುಮೆಯನ್ನು ಒಲಿಸಿಕೊಳ್ಳೋ ಪ್ರಯತ್ನದಂತಿದೆ.
ಒಂದು ಮುನ್ನ - ಇನ್ನೊಂದು ನಂತರದ ಪ್ರಕ್ರಿಯೆ.
Very cute
ReplyDelete