Sunday, June 30, 2013

Shri Krishnana Nooraru Geethegalu - 342

ತಪ್ಪುಗಳೆಣಿಸದಿರೊ

ತಪ್ಪುಗಳೆಣಿಸದಿರೊ ಹರಿ ಎನ್ನ ತಪ್ಪುಗಳೆಣಿಸದಿರೊ
ತಪ್ಪುಗಳೆಲ್ಲವ ಮನ್ನಿಸೊ ನಾ ನಿನ್ನ ದಾಸರ ಚರಣದ ಕೂಸು ಕಂಡಯ್ಯಾ

ಅಸುರನು ಅಂಬುಧಿಯೊಳ್ ಅವನಿಯ ಅಡಗಿಸೆ
ತರಿದು ತಕ್ಷಣದಿ ಅವಳ ರಕ್ಷಿಸಿದ
ವೈಶಂಪಾಯನದಿ ಕುರುಜನು ಅವಿತಿರಲು
ಧರ್ಮದ ಗದೆಯಾಗಿ ತೊಡೆಯ ಮುರಿದವನೆ (೧)

ಮಿಥ್ಯದ ಬಿಂಬದೊಳ ಸತ್ಯದ ಇಂಬು ನೀನೊ
ಜಗಮಿಥ್ಯವನಳಿದು ಸತ್ಯವ ಎಮಗಿರಿಸೊ
ಕೋಟೆಬೆಟ್ಟದ ವಾಸ ಶ್ರೀನಿವಾಸ ವಿಠಲಯ್ಯ
ಕಲಿಯೊಳು ಸುಜನನ ನಿಜದೊಳು ಗೆಲಿಸೊ (೨)

ತಪ್ಪುಗಳೆಣಿಸದಿರೊ ಹರಿ ಎನ್ನ ತಪ್ಪುಗಳೆಣಿಸದಿರೊ
ತಪ್ಪುಗಳೆಲ್ಲವ ಮನ್ನಿಸೊ ನಾ ನಿನ್ನ ದಾಸರ ಚರಣದ ಕೂಸು ಕಂಡಯ್ಯಾ

(ಕೋಟೆಬೆಟ್ಟ: ಮಂಡ್ಯ ಜಿಲ್ಲೆ, ನಾಗಮಂಗಲ ತಾಲೂಕಿನ ಕೋಟೆಬೆಟ್ಟದ ಕಂಭದ ನರಸಿಂಹಸ್ವಾಮಿ, ನನ್ನ ಪೂರ್ವಜರ ಕಾಲದಿಂದಲೂ ನಾವು ಪೂಜಿಸುತ್ತಿರುವ ದೈವ)

ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೩೦.೦೬.೨೦೧೩

1 comment:

  1. ಈ ಹಿಂದೆ ನಾನು ಕೆಲಸ ಮಾಡುತ್ತಿದ್ದ ಸಂಸ್ಥೆಯಲ್ಲಿ ಸದಾ ಕೋಟೆಬೆಟ್ಟದ ಕಂಭದ ನರಸಿಂಹಸ್ವಾಮಿ ದೇವಸ್ಥಾನಕ್ಕೆ ಹೋಗಿ ಬರುವ ಒಂದು ಹಿಂಡೇ ಇತ್ತು!

    ಮಿಥ್ಯದ ಬಿಂಬದೊಳ ಸತ್ಯದ ಇಂಬು ನೀನೊ
    ಜಗಮಿಥ್ಯವನಳಿದು ಸತ್ಯವ ಎಮಗಿರಿಸೊ
    ದೇವರು ಇಷ್ಟು ನಮಗೆ ಉಪಕಾರ ಮಾಡಿದರೆ ಸಾಕಲ್ಲವೇ...

    ReplyDelete