Monday, June 10, 2013

Shri Krishnana Nooraru Geethegalu - 340

ರಾಮನೆನೆ ಸುಖವು

ರಾಮನೆನೆ ಸುಖವು ಶ್ರೀರಾಮನೆನೆ ಸುಖವು
ರಾಮ ಶ್ರೀರಾಮನೆನೆ ಸುಖದ ಸುಖವು

ರಘುವಂಶ ಕುಲತಿಲಕ ರಾಮನೆನೆ ಸುಖವು
ಕೌಸಲ್ಯೆ ದಶರಥಸುತನೆನೆ ಸುಖವು
ಭರತ ಶತ್ರುಘ್ನಂಗೆ ಸೋದರನೆನೆ ಸುಖವು
ಅಯೋಧ್ಯೆ ದೇವನೆನೆ ಸುಖದ ಸುಖವು (೧)

ಅಕ್ಷಯ ಗುಣಧಾಮ ರಾಮನೆನೆ ಸುಖವು
ಜಗಪ್ರೇಮ ಕ್ಷೇಮ ಶ್ರೀರಾಮನೆನೆ ಸುಖವು
ಧರೆಯ ದುರಿತವನಳಿವ ಶ್ರೀನಿವಾಸ ವಿಠಲನ್ನ
ಮಾತೆಸೀತೆ ರಾಮನೆನೆ ಸುಖದ ಸುಖವು (೨)

ರಾಮನೆನೆ ಸುಖವು ಶ್ರೀರಾಮನೆನೆ ಸುಖವು
ರಾಮ ಶ್ರೀರಾಮನೆನೆ ಸುಖದ ಸುಖವು

2 comments:

  1. ಮನಸ್ಸು ಪಾವನವಾಯಿತು ದಾಸೋತ್ತಮ, ಅಕ್ಷಯ ಗುಣಧಾಮ ರಾಮನೆನೆ ಸುಖವು.

    ReplyDelete
  2. ರಾಮ ನಾಮ ಜಪದಲಿ ಸುಖವ ಕಾಣಿರೋ ಎಂಬಂತೆ ಇವೆ ಸಾಲುಗಳು ಸರ್... ತುಂಬಾ ಚೆನ್ನಾಗಿದೆ ಭಕ್ತಿಭಾವ ಅಡಗಿದೆ...

    ReplyDelete