Monday, June 3, 2013

ಒಂದು ಮಳೆಗಾಲದ ರಾತ್ರಿ

ಎದೆ ನಡುಗಿಸಿದ ಗುಡುಗಿ
ಗೆ ಅಪ್ಪಿಕೊಂಡೆ ಪಕ್ಕ
ಮಲಗಿದ್ದ ನನ್ನವನ

ಬಿಸಿ ಸ್ಪರ್ಶಕ್ಕೆ ಎಚ್ಚರ
ಗೊಂಡವನ ಕಂಗಳಲಿ
ಪಳಕ್ಕನೆ ಆಸೆ ಮಿಂಚು

ನಾ ನಡುರಾತ್ರಿಯ ಬೇಸಿಗೆ
ಅವನು ಕೆನೆಗಟ್ಟಿದ ಮುಗಿಲು

ನಡುವೆ ಪ್ರೀತಿ ತಂಗಾಳಿ
ಮಳೆಯಾದ ನಾ ಇಳೆಯಾದೆ

ಭೋರ್ಗರೆದ ಇಳಿದು ಜಾರಿನಲಿ
ಏರಿ ಎದೆಶಿಖರಗಳಲಿ

ಅವನೊಳು ನಾನೋ
ನನ್ನೊಳು ಅವನೋ

ಅವನ ಹರಿತಕೆ ತೊಡೆ ನಡು
ವ ಕತ್ತಲಲಿ ಚಂದ್ರೋದಯ
ದನಾವರಣ

ಇದು
ಒಂದು ಮಳೆಯ ರಾತ್ರಿಯಲಿ
ನನ್ನೆದೆ ಹಾಳೆಯಲಿ ಅವ
ಬರೆದ ಜೀವ ಕವನ

1 comment:

  1. ಮಳೆಗಾಲದ ರಾತ್ರಿಯ ಶ್ರುಂಗಾರ ಕಾವ್ಯ ರಸವತಾಗಿದೆ.

    ReplyDelete