Saturday, June 15, 2013

Shri Krishnana Nooraru Geethegalu - 341

ಮತಿಯಿರಿಸೊ

ಮತಿಯಿರಿಸೊ ಎಮ್ಮ ಯತಿಗಳು ಪೂಜಿಪ
ಶ್ರೀಪತಿ ಹರಿಯೊಳು ನರಮನುಜ

ನಂಬಲು ಶ್ರೀಚರಣ ನಿಜವಯ್ಯ ದುರ್ಹರಣ
ಇಹಪರದೊಳು ಅವನೆ ಸುಖಕಾರಣ
ಬಿಂದುವು ಅವ ನಮಿಸೊ ಸಿಂಧುವು ಅವ ನಮಿಸೊ
ಎಲ್ಲವೂ ಹರಿಯೆಂದು ಪರಿಭಾವಿಸೊ (೧)

ಶ್ರೀಹರಿ ಧ್ಯಾನವೆ ಜೀವಸಾಧನೆ ಕಾಣೊ
ಜನ್ಮಜನ್ಮಗಳಲ್ಲಿ ಅರಿ ಮನುಜ
ಶ್ರೀನಿವಾಸ ವಿಠಲನ್ನ ಬಿಡದೆ ನೀ ಸ್ಮರಿಸಲು
ಇಹದೊಳೆ ಮುಕುತಿಯ ಸಿರಿಕಣಜ (೨)

ಮತಿಯಿರಿಸೊ ಎಮ್ಮ ಯತಿಗಳು ಪೂಜಿಪ
ಶ್ರೀಪತಿ ಹರಿಯೊಳು ನರಮನುಜ

ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೪.೦೬.೨೦೧೩

1 comment:

  1. ಸಕಲ ಚರಾಚರ ಲೋಕೇಶ್ವರ ಎನ್ನುವಂತೆ:
    ಬಿಂದುವು ಅವ ನಮಿಸೊ ಸಿಂಧುವು ಅವ ನಮಿಸೊ
    ಎಲ್ಲವೂ ಹರಿಯೆಂದು ಪರಿಭಾವಿಸೊ

    ReplyDelete