Friday, January 4, 2013

Shri Krishnana Nooraru Geethegalu - 328

ಹೇಳೆ ಸಖಿ ಬಂದನೆ

ಸಂಜೆ ಬರುವೆನೆಂದನೆ ಒಲುಮೆ ತರುವೆನೆಂದನೆ
ಎನ್ನ ಜೀವದ ಜೀವ ಕೃಷ್ಣನು ಹೇಳೆ ಸಖಿ ಬಂದನೆ

ಹರಿವ ಯಮುನೆಯ ಕೇಳಿದೆ ಅದೇಕೊ ಮೌನವ ತಾಳಿದೆ
ಹಾಡೊ ಕೋಗಿಲೆ ಕೊರಳಿನೊಳಗೆ ಗಾನ ಧ್ಯಾನವಗೈದಿದೆ

ಎನ್ನ ಪ್ರಾಣದ ಜೀವದುಸಿರದು ಮುರಳಿನಾದವ ಹರಸಿದೆ
ಒಂಟಿ ಅಲೆದಿಹ ಎನ್ನ ಹೃದಯದಿ ವಿರಹ ತಾನು ಸುಡುತಿದೆ

ನಾನು ಬುವಿಯು ಅವನು ಮುಗಿಲು ಸುರಿವ ಒಲುಮೆಯ ದಾಹವೆ
ಶ್ರೀನಿವಾಸ ವಿಠಲನವನೊಳು ಈ ರಾಧೆಯ ಮೋಹವೆ

ಸಂಜೆ ಬರುವೆನೆಂದನೆ ಒಲುಮೆ ತರುವೆನೆಂದನೆ
ಎನ್ನ ಜೀವದ ಜೀವ ಕೃಷ್ಣನು ಹೇಳೆ ಸಖಿ ಬಂದನೆ

ರಚನೆ: ಎನ್ಕೆ, ಭದ್ರಾವತಿ / ೦೪.೦೧.೨೦೧೩

1 comment:

  1. ನಾನು ಪದೇ ಪದೇ ಓದಿಕೊಂಡ ಸಾಲುಗಳೆಂದರೆ:
    "ನಾನು ಬುವಿಯು ಅವನು ಮುಗಿಲು ಸುರಿವ ಒಲುಮೆಯ ದಾಹವೆ
    ಶ್ರೀನಿವಾಸ ವಿಠಲನವನೊಳು ಈ ರಾಧೆಯ ಮೋಹವೆ"

    ಎಂತಹ ಕಾಯುವಿಕೆ, ಎಂತಹ ಅಮಿತ ಭಕ್ತಿತ ಪರವಶತೆ.

    ReplyDelete