Friday, January 11, 2013

Shri Krishnana Nooraru Geethegalu - 332

ಎನ್ಯಾಕೊ ಮರೆತುಬಿಟ್ಟೆ

ಯಾಕೊ ನರಜನ್ಮ ಕೊಟ್ಟೆ ಭವದೊಳು ಬದುಕ ಬಿಟ್ಟೆ
ಹುಟ್ಟಿಸಿದ ಹರಿ ನೀನು ಎನ್ಯಾಕೊ ಮರೆತುಬಿಟ್ಟೆ

ಬೇಡಲಿಲ್ಲವೊ ನಾನು ಕೊಡುಯೆಂದು ಜನುಮವ
ಕರುಮವ ಕಳೆಯೆಂದು ಕರೆತಂದವ ನೀನೊ
ಕರೆದವ ಪೊರೆವುದು ತಾಯಿಯಂದದಿ ನಿಜವು
ಶ್ರೀನಿವಾಸ ವಿಠಲಯ್ಯ ಸಲಹೆನ್ನ ತಂದೆ

ಯಾಕೊ ನರಜನ್ಮ ಕೊಟ್ಟೆ ಭವದೊಳು ಬದುಕ ಬಿಟ್ಟೆ
ಹುಟ್ಟಿಸಿದ ಹರಿ ನೀನು ಎನ್ಯಾಕೊ ಮರೆತುಬಿಟ್ಟೆ

ರಚನೆ: ಎನ್ಕೆ, ಭದ್ರಾವತಿ / ೧೨.೦೧.೨೦೧೩

1 comment:

  1. ನಾನು ಸದಾ ಹಾಡಿಕೊಳ್ಳುತ್ತೇನೆ ಭದ್ರಾವತಿ ದಾಸರೇ. ಈ ಕೀರ್ತನೆಯನ್ನೇ!

    ReplyDelete