Thursday, May 23, 2013

Shri Krishnana Nooraru Geethegalu - 339

ಶ್ರೀನಿವಾಸ ಸುಖ

ವಸುಧೆಯೊಳಾ ವಾಸುದೇವನ ಭಜಿಪ
ನರನಿಗೆ ಇಹದೊಳೆ ಸಕಲ ಸುಖ

ಗೋವಿಂದ ಹರಿ ಗೋವಿಂದ ರಘುಕುಲತಿಲಕ ಶ್ರೀಗೋವಿಂದ
ಗೋವಿಂದ ಹರಿ ಗೋವಿಂದ ಶ್ರೀರಾಮಚಂದ್ರ ಶ್ರೀಗೋವಿಂದ

ಪಂಚಭೂತದಿ ರಚಿಸಿ ಉಸಿರ ಒಳಗಿಟ್ಟಾ
ದೇವನ ಸ್ಮರಣೆಯೇ ಸರ್ವ ಸುಖ

ಗೋವಿಂದ ಹರಿ ಗೋವಿಂದ ಗೋಕುಲವಾಸ ಶ್ರೀಗೋವಿಂದ
ಗೋವಿಂದ ಹರಿ ಗೋವಿಂದ ಕೇಶವ ಕೃಷ್ಣ ಶ್ರೀಗೋವಿಂದ

ಅವನೆಂಬೊ ಕಡಲೊಳು ನೀನೆಂಬೊ ಗುರಿಹುಡುಕೊ
ಶ್ರೀನಿವಾಸ ವಿಠಲನೆ ಜಗದ ಸುಖ

ಗೋವಿಂದ ಹರಿ ಗೋವಿಂದ ತಿರುಮಲವಾಸ ಗೋವಿಂದ
ಗೋವಿಂದ ಹರಿ ಗೋವಿಂದ ಶ್ರೀಶ್ರೀನಿವಾಸ ಗೋವಿಂದ

ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೩.೦೫.೨೦೧೩

1 comment:

  1. ಶ್ರೀನಿವಾಸ ವಿಠಲನೆ ಜಗದ ಸುಖ ಎನ್ನುವುದು ನಿಜವಾದ ಮಾತು ಕವಿವರ್ಯ. ಹರಿ ನಾಮವೇ ಚೆನ್ನ ಎಂದನು ಅಂದು ಕವಿ.

    ReplyDelete