Monday, December 10, 2012

Shri Krishnana Nooraru Geethegalu - 320

ಭಗವಂತ

ಭಗವಂತ ನೀ ಕರುಣದನಂತ
ಸಲಹೊ ಶ್ರೀಪತಿ ಲಕುಮಿಕಾಂತ

ನಿನ್ನನೇ ನಂಬಿಹೆ ನಂಬಿ ನಾ ಬಂದಿಹೆ
ನೀನೇ ಸತ್ಯವು ದೇವ ಸಾಕ್ಷಿ ಚೇತನವು
ನಮಿಪೆನೊ ಜಗಮೂಲ ಕಾಯೆನ್ನ ಕುಶಲವ
ಸುಗುಣದನಂತನೆ ಸಂಪನ್ನ ಕೃಷ್ಣ (೧)

ಪರಮಪಾವನ ನೀನು ಪರಾಮರ್ಶಿಸೊ ಎನ್ನ
ಅನ್ಯಗಳೆಲ್ಲವ ಪಿತನಂದದಿ
ಪಾಪನಾಶನ ನೀನು ಶ್ರೀನಿವಾಸ ವಿಠಲಯ್ಯ
ಕ್ಷಮಿಸೆನ್ನ ನಿನ್ನ ಸುತನಂದದಿ (೨)

ಭಗವಂತ ನೀ ಕರುಣದನಂತ
ಸಲಹೊ ಶ್ರೀಪತಿ ಲಕುಮಿಕಾಂತ

ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೭.೧೨.೨೦೧೨

1 comment:

  1. ಅನ್ಯತಾ ಶರಣಂ ನಾಸ್ತಿ

    ಇದಕಿಂತ ಶರಣಾಗತಿ ಉಂಟೇ ಆಧುನಿಕ ದಾಸ ಶ್ರೇಷ್ಠ.

    ReplyDelete