Friday, December 14, 2012

Shri Krishnana Nooraru Geethegalu - 322

ಮೀರೆಯ ಮರೆತೆಯಾ

ಬಾರೆಯಾ ದಯೆ ತೋರೆಯಾ
ಗೋಪಪ್ರಿಯ ಶ್ರೀಗೋಪಾಲಕೃಷ್ಣನೆ
ಈ ಮೀರೆಯ ಮರೆತೆಯಾ

ನಾನು ಎನುವ ಗಂಡನ ಬಿಟ್ಟು
ಆರು ಮನೆಯ ಮೋಹವ ಬಿಟ್ಟು
ಕಾಯುತಿಹೆನೊ ಮಾರಪಿತನೆ
ಎನ್ನ ಜೀವವ ನಿನ್ನೊಳಿಟ್ಟು (೧)

ನಿನ್ನ ಇರುವಿನೊಳೆನ್ನ ಇರುವು
ನಿನ್ನ ಸನಿಹದೆ ಮೀರೆ ಜಗವು
ನೀನೇ ಎನ್ನೊಳ ಪ್ರೀತಿಧಾರೆ
ಶ್ರೀನಿವಾಸ ವಿಠಲ ದೊರೆಯೆ (೨)

ಬಾರೆಯಾ ದಯೆ ತೋರೆಯಾ
ಗೋಪಪ್ರಿಯ ಶ್ರೀಗೋಪಾಲಕೃಷ್ಣನೆ
ಈ ಮೀರೆಯ ಮರೆತೆಯಾ

ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೫.೧೨.೨೦೧೨

1 comment:

  1. ಎನ್ನದೆಲ್ಲವ ಬಿಟ್ಟು ನಿನ್ನಲೇ ಐಕ್ಯವಾಗುವ ಆಶಯ ಹೊತ್ತ ಈ ಭಾವ ಮೆಚ್ಚುಗೆಯಾಯ್ತು.

    ReplyDelete