Tuesday, December 25, 2012

Shri Krishnana Nooraru Geethegalu - 326

ಚರಣ ತೋರಿಸೊ

ಚರಣ ತೋರಿಸೊ ಶ್ರೀರಾಮನ ಚರಣ ತೋರಿಸೊ
ಚರಣ ತೋರಿಸೊ ಕರುಣ ನಿನ್ನ ಶ್ರೀಚರಣಕೆರಗುವೆ ನಾ

ನಿನ್ನ ದೊರೆ ಶ್ರೀರಘುಪತಿ ರಾಮನ ಮಾತೆ ಜಾನಕಿ ಪ್ರೇಮದ ಪ್ರಾಣನ
ಬಕುತಿಗೆ ಒಲಿದು ತಾನೆದೆಯೊಳು ನಿಂದನ ದಶರಥಸುತ ಶ್ರೀಪುರುಷೋತ್ತಮನ (೧)

ರಾಮರಾಮನ ಶ್ರೀರಾಮಚಂದ್ರನ ಮುನಿಜನವಂದಿತ ಕೌಸಲ್ಯೆ ಕಂದನ
ಸತ್ಯವಚನನ ಪುಣ್ಯಚರಿತನ ಲಂಕೆಯ ಕೇಡದ ಧರ್ಮದಿ ಮುರಿದನ (೨)

ರಾಮನ ಶ್ಯಾಮನ ದಶಮುಖದೇವನ ಆದಿಯಿಂ ಧರಣಿಯ ಸುಖದೊಳು ಕಾದನ
ಕಲಿಯೊಳು ನರನ ಅನ್ಯವ ಕಳೆದು ತಾ ಮುಕುತಿಯ ತೋರೊ ಶ್ರೀನಿವಾಸ ವಿಠಲನ (೩)

ಚರಣ ತೋರಿಸೊ ಶ್ರೀರಾಮನ ಚರಣ ತೋರಿಸೊ
ಚರಣ ತೋರಿಸೊ ಕರುಣ ನಿನ್ನ ಶ್ರೀಚರಣಕೆರಗುವೆ ನಾ

ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೫.೧೨.೨೦೧೨

1 comment:

  1. ಅಂಜನಾ ಸುತನ ಮೂಲಕ ರಾಮ ಸಾನಿಧ್ಯ ಕೋರುವ ತಂತ್ರಗಾರಿಕೆ ಸುಲಭ ಮತ್ತು ಸುಲಲಿತ.

    ReplyDelete