Wednesday, October 17, 2012

Shri Krishnana Nooraru Geethegalu - 309

ಎಲ್ಲವ ಬಿಟ್ಟೆನೊ

ಅಲ್ಲದ ಬಿಟ್ಟೆನೊ ಸಲ್ಲದ ಬಿಟ್ಟೆನೊ
ಸಜ್ಜನರೊಲ್ಲದ ಎಲ್ಲವ ಬಿಟ್ಟೆನೊ

ಹರಿಯನು ಕಾಣದ ಕಂಗಳ ಬಿಟ್ಟೆನೊ
ಸ್ಮರಣೆಯ ಕೇಳದ ಕರ್ಣಗಳ
ಹರಿಯನು ನುಡಿಯದ ನಾಲಗೆ ಬಿಟ್ಟೆನೊ
ಅವನೇ ಇಲ್ಲದ ಹೃದಯಗಳ (೧)

ನಾನು ನಾನೆಂಬಾರು ಕೇಡನು ಬಿಟ್ಟೆನೊ
ನೀನು ನೀನೆನ್ನುವ ಬಕುತಿಯೊಳು
ಶುದ್ಧದ ನೊಸಲೆನದ ಶ್ರೀಚರಣದೊಳಿಟ್ಟೆನೊ
ಶ್ರೀನಿವಾಸ ವಿಠಲನೆ ಸಲಹೆನುತ (೨)

ಅಲ್ಲದ ಬಿಟ್ಟೆನೊ ಸಲ್ಲದ ಬಿಟ್ಟೆನೊ
ಸಜ್ಜನರೊಲ್ಲದ ಎಲ್ಲವ ಬಿಟ್ಟೆನೊ

    ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೭.೧೦.೨೦೧೨

1 comment:

  1. ಅವನಿಲ್ಲದೆ ಏನು ಇಲ್ಲ ಎಂಬ ಅನನ್ಯ ಭಕ್ತಿ ಭಾವ ಮತ್ತು ಅವನಿಗಾಗಿ ಎಲ್ಲ ಬಿಡುವ ದಾಸವಾಣಿ ನೆಚ್ಚಿಗೆಯಾಯ್ತು.

    ReplyDelete